ಶುಕ್ರವಾರ, ಮೇ 15, 2026

ಸೌಂದರ್ಯ ಲೋಕದಿಂದ ತೆರೆಗಿಳಿದ ಸುಂದರ ಕಲಾಕೃತಿಯೇ - "ಕಲಾವಿದ"


ನಾನು
  ಎಸ್ ಎಸ್ ಎಲ್ ಸಿ ಓದುತ್ತಿದ್ದ ದಿನಗಳವುಶಾಲೆಗೆ ಹೋಗುವಾಗ ನನ್ನ ಅಟ್ಲಾಸ್ ಸೈಕಲ್ ನೊಂದಿಗೆ ಗೆಳೆಯ ಫಕೀರನ ಮನೆಗೆ ಹೋಗಿ ಅಲ್ಲಿಂದ ಇಬ್ಬರು ಶಾಲೆಗೆ ಜೊತೆಯಾಗಿ ಹೋಗುವುದು ದೈನಂದಿನ ರೂಢಿ. ‌ಯಥಾ ಪ್ರಕಾರ ಅವನ ಮನೆಗೆ ಹೋದೆ. ಅವನಿನ್ನು ಸ್ನಾನಕ್ಕೆ ಹೊರಡುವವನಿದ್ದ. ಅಲ್ಲಿಯವರೆಗೆ ಟಿವಿ ನೋಡ್ತಾ ಇರು ಅಂತ ಹೇಳಿ ಯು2 (ಈಗ ಉದಯ ಮ್ಯೂಸಿಕ್) ಚಾನೆಲ್ ಆನ್ ಮಾಡಿ ಹೋದ. ಯಾವ್ಯಾವುದೋ ಹಾಡುಗಳು ಮುಗಿದು ರವಿಚಂದ್ರನ್ ಹಾಡೊಂದು  ಶುರುವಾಯಿತು ನೋಡಿ! ನನ್ನ ಹೃದಯದೊಳಗೆ ಭಾವ ತರಂಗದ ಅಲೆಗಳನ್ನು ಎಬ್ಬಿಸಿತು. ಅದುಕಲಾವಿದಸಿನಿಮಾದಹೇ ನವಿಲೇ…” ಹಾಡು. ಅಡ್ಡ - ಉದ್ದವಾಗಿರುವ ಬಣ್ಣ ಬಣ್ಣದ ಹಲವು ಗೋಡೆಗಳು, ಗೋಡೆಗಳ ನಡುವೆ ಹಲವು ದ್ವಾರಗಳುಅವುಗಳ ಒಳಗಿಂದ ಓಡುವ ನಾಯಕಿ, ಹಿಂಬಾಲಿಸುವ ನಾಯಕಅಲ್ಲಿಯೇ ನರ್ತನ…  ಕೋರಿಯೋಗ್ರಾಫಿ ಇದೆಯಲ್ಲಾ  ನಿಜಕ್ಕೂ ಚೆಂದ


ಹಾಡು ಎಷ್ಟು ಇಷ್ಟವಾಗಿಬಿಟ್ಟಿತಂದ್ರೆ ಸುಮಾರು ವರ್ಷಗಳ ಕಾಲ ಬಹುಶಃ ನನ್ನ ಎಂ. ಮುಗಿಯುವವರೆಗೆ ನನ್ನ ನೋಟ್ ಬುಕ್ ಮೂಲೆಯಲ್ಲಿ, ಕೈಗೆ ಸಿಕ್ಕ ಹಾಳೆಯಲ್ಲಿ ಸುಮ್ಮನೇ, “ಹೇ ನವಿಲೇ..”  ಅಂತ ಗೀಚಿ ಬಿಡುತ್ತಿದ್ದೆ


ಇದೇ ಚಿತ್ರದ ಇನ್ನೊಂದು ಹಾಡುಹೂವ್ವಾ ರೋಜಾ ಹೂವ್ವಾ…”  ಹಾಡಿನಲ್ಲಿ ಹಾರುವ ಗುಲಾಬಿ ಹೂಗಳು, ಹೂವಿನ ದಳಗಳು, ಅವುಗಳ ಚೆಲುವಿಗೆ ಪೈಪೋಟಿ ನೀಡುವ  ನಾಯಕಿ ರೋಜಾಳ ಕಣ್ಣ ಹೊಳಪುಕೆನ್ನೆಯ ನುಣುಪು, ಆಕೆಯ ಚೆಲುವಿಗೆ  ಫಿದಾ ಆಗದವನೇ ಪಾಪಿ..! ಆಕೆಯ ನಡಿಗೆಯೇ ನರ್ತನದಂತೆ ಕಾಣಿಸುತ್ತದೆ. ರೋಜಾ ನಿಜಕ್ಕೂ ರೋಜಾ ಹೂವ್ವಿನ ಹಾಗೇ. ಬಹುಶಃ ಆಕೆಯ ಹೆಸರು ಅನ್ವರ್ಥವಾಗಿ ಕಾಣಿಸುವುದು ಹಾಡಿನಲ್ಲಿ ಮಾತ್ರವೇ ಅನ್ಸುತ್ತೆ

 

ಮುಂದೆಂದೋ  ಸಿನಿಮಾ ನೋಡಿದೆ

ಕಲಾವಿದಅಂದಿಗೆ ಫ್ಲಾಫ್ ಸಿನಿಮಾ.‌ ಆದರೆ ಹಾಡುಗಳು ಮಾತ್ರ ಜನಮಾನಸದಲ್ಲಿ ಅಚ್ಚಳಿಯದೇ ಉಳಿದಂತವುಗಳು.. ಅಬ್ಬಾ! ಅದೆಂಥಾ ಸಾಹಿತ್ಯ ಸಂಗೀತ..!! ಜೊತೆಗೆ ದೃಶ್ಯೀಕರಣ ಅದ್ಭುತ..!!!  ಚಿತ್ರದಲ್ಲಿ ಏಳೆಂಟು ಹಾಡುಗಳಿವೆಎಲ್ಲಾ ಹಾಡುಗಳು ಒಂದಕ್ಕಿಂತ ಒಂದು ಸುಂದರ. ಅವುಗಳನ್ನು ಕೇಳುತ್ತಿದ್ದರೆ ಮನಸ್ಸು ಯಾವುದು ಭಾವ ತೀರದಲ್ಲಿ ಕಳೆದುಹೋಗುತ್ತದೆ. ಇಲ್ಲಿಯವರೆಗೆ ಸಾವಿರಾರು ಸಲ ಹಾಡುಗಳನ್ನು ಕೇಳಿದ್ದೇನೆ. ಕೇಳುವುದು ಒಂದು ಬಗೆಯ ಖುಷಿಯಾದರೆ ನೋಡುವುದು ಇನ್ನೊಂದು ಬಗೆಯ ಮರಣಾನಂದ..! ‌ ಪ್ರತಿ ಹಾಡಿನ, ಪ್ರತಿಯೊಂದು ಫ್ರೇಮ್ ನಲ್ಲಿ ಸೌಂದರ್ಯವೆಂಬುದು ಧುಮ್ಮಿಕ್ಕಿ ಹರಿಯುತ್ತದೆ. ಹರಡುವ ವಿವಿಧ ಬಣ್ಣಗಳು, ಕುಂಚದ ಕಲೆಗಳುಬಣ್ಣ ಬಣ್ದದ ಗಿಳಿಗಳು, ರೆಕ್ಕೆ ಫಡಫಡಿಸುವ ಬಿಳಿ ಪಾರಿವಾಳಗಳುಕತ್ತು ತಿರುಗಿಸಿ ನೋಡುವ ನವಿಲು, ಹಿಂಡುಹಿಂಡಾಗಿ ಚಲಿಸುವ ಬಿಳಿ ಬಾತುಕೋಳಿಗಳುಚೆಲುವು ತುಂಬಿಕೊಂಡು ತೆರೆಮೇಲೆ ಚಿಮ್ಮುವ ಬಣ್ಣ ಬಣ್ಣದ ಅಸಂಖ್ಯಾತ ಹೂಗಳುಹೂವಿನಷ್ಟೇ ಚಂದದ ನಾಯಕಿಯರು, ರೋಜಾ ಮತ್ತು ಹೀರಾ.‌  ಇವರ ವೃತ್ತಿ ಬದುಕಿನ ಜೀವನದಲ್ಲಿಕಲಾವಿದಸಿನಿಮಾದಲ್ಲಿ ಕಂಡಂತೆ ಇನ್ಯಾವ ಸಿನಿಮಾದಲ್ಲೂ ಅಷ್ಟೊಂದು ಚೆಲುವಾಗಿ ಕಂಡಿಲ್ಲವೇನೋ.‌  ಅದರಲ್ಲೂರೋಜಾಆಕೆಯ ಸೌಂದರ್ಯ ಸಾಕ್ಷಾತ್ ನಮ್ಮ ಕಣ್ಣಲ್ಲಿ ಕದಲದೇ ಕೂತುಬಿಡುತ್ತದೆ. ಕೊಂಚವೂ ಸೋರಿ ಹೋಗದಂತೆ ಸೌಂದರ್ಯ ಲೋಕದ ಎಲ್ಲಾ ಸೌಂದರ್ಯವನ್ನು ಸೆರೆಹಿಡಿದ ಛಾಯಾಗ್ರಾಹಕ  ಜಿ ಎಸ್ ವಿ ಸೀತಾರಾಮ್ ಅವರು ರವಿಚಂದ್ರನ್ ಅವರ ನಿಜವಾದ ಕಣ್ಣು

 


ಪ್ರೇಮ ಪ್ರೇಮ…., ಸಾವಿರಕೆ ಒಬ್ಬ ಕಲಾವಿದ…., ಅಂದಗಾರ ಅಳಿಮಯ್ಯ….,  ಒಂದು ಬೆಚ್ಚನೆಯ ಗೂಡಿರಲು…., ತುಂಟಿಯೇ…..  ಎಲ್ಲಾ ಹಾಡುಗಳು ಚೆಂದಕ್ಕಿಂತ ಚೆಂದದ ಹಾಡುಗಳು.‌ ಇವುಗಳಿಗೆ ಜೀವತುಂಬಿ ಹಾಡಿದ ಮಧುರ ಕಂಠದ ಮಹಾನ್ ಗಾಯಕರು ಎಸ್.ಪಿ.ಬಿ, ಎಸ್ ಜಾನಕಿ, ಹರಿಹರನ್, ಮನು, ಚಿತ್ರಾ, ಸ್ವರ್ಣಲತಾ….. ನಮ್ಮ ಬದುಕನ್ನು ಮತ್ತೆ ಮತ್ತೆ ಪ್ರೀತಿಸುವ ಹಾಗೆ ಮಾಡಿದ ಇವರಿಗೆಲ್ಲಾ ಪ್ರೀತಿಯ ಧನ್ಯವಾದಗಳು

 

ಹಂಸಲೇಖ ಎಂಬ ಮ್ಯೂಸಿಕ್ ಮಾಂತ್ರಿಕ ತನ್ನ ಬತ್ತಳಿಕೆಯಲ್ಲಿರುವ ಅಪರೂಪದ ಅತಿ ಸುಮಧುರ ಸಾಹಿತ್ಯ, ಸಂಗೀತದ ಮಾಯಾಸ್ತ್ರಗಳನ್ನು ಕೇವಲ ರವಿಚಂದ್ರನ್ ಎಂಬ ಕನಸುಗಾರನಿಗೆ ಮಾತ್ರ ಮೀಸಲಾಗಿರಿಸಿದ್ದಾರೇನೋ ಎಂಬಂತೆ ಅವರು ರಚಿಸಿದ ಸಾಹಿತ್ಯ, ಸಂಯೋಜಿಸಿದ ಸಂಗೀತ ಅಸಾಧಾರಣವಾದವುಗಳು. “ಕಲಾವಿದಸಿನಿಮಾದ ಹಾಡುಗಳು ಇಂದಿಗೆ ಹಳೆಯದೆನಿಸಬಹುದು. ಆದರೆಹಾಡು ಹಳೆಯದಾದರೂ ಭಾವ ನವ ನವೀನಎನ್ನುವಂತೆ ಹಾಡು-ಸಂಗೀತ ಎಂಥವರ ಎದೆಯಲ್ಲೂ ಪ್ರೀತಿಯ ಸೆಲೆಯನ್ನು ಜಿನುಗಿಸಬಲ್ಲದು

 

ಹಂಸಲೇಖ ಪ್ರೇಮವನ್ನು ಪೆನ್ನಿಗೆ ತುಂಬಿಕೊಂಡು ಬರೆದಿದ್ದರೆ ರವಿಚಂದ್ರನ್ ಸೌಂದರ್ಯವೆಂಬುದನ್ನು ಅಕ್ಷರಶಃ ತೆರೆಗೆ ಚೆಲ್ಲಿದ್ದಾರೆ. ಹಂಸಲೇಖ ಅವರದು ಸಂಗೀತ ವೈಭವವಾದರೆ ರವಿಚಂದ್ರನ್ ಅವರದು ದೃಶ್ಯ ವೈಭವ. ಹಂಸಲೇಖ ಅವರದು ಕಾವ್ಯ, ರವಿಚಂದ್ರನ್ ಅವರದು ದೃಶ್ಯಕಾವ್ಯ ರವಿ-ಕವಿಯ ಕಾಂಬಿನೇಷನ್ ಕನ್ನಡ ಚಿತ್ರರಂಗದಲ್ಲಿ ಮಾಡಿದ ಮೋಡಿ ವರ್ಣಾನಾತೀತ..!  

 

ಒಂದು ಒಳ್ಳೆಯ ಪುಸ್ತಕವನ್ನು ಇಷ್ಟಪಟ್ಟು ಓದಿದಂತೆ, ಚೆಂದದ ಸಿನಿಮಾಗಳನ್ನು ಇಷ್ಟಪಟ್ಟು ನೋಡುತ್ತೇನೆನಾನು ಯಾವ ನಟನ ಅಭಿಮಾನಿ ಅಲ್ಲಆದರೆ ಕನ್ನಡ ಸಿನಿಮಾ ಅಂದಕೂಡಲೇ ರವಿಚಂದ್ರನ್ ಇಷ್ಟ ಆಗುತ್ತಾರೆಸಿನಿಮಾದೆಡೆಗಿನ ಅವರ ಪ್ಯಾಷನ್, ತೆರೆ ಮೇಲೆ ಅನಾವರಣಗೊಳಿಸುವ ಸೌಂದರ್ಯದ ಅಗಾಧತೆ ಇಷ್ಟವಾಗುತ್ತದೆ. “ರವಿಎಂಬ ಹೆಸರಿಗಿರುವ ಶಕ್ತಿಯೇ ಅಂತಹುದ್ದೇನೋ, ಅದು ಎಂಥವರನ್ನು  ಒಮ್ಮೆಯಾದರೂ ಇಷ್ಟವಾಗಿಸಿಬಿಡುತ್ತದೆ

 

ಇಡೀ ಮನುಕುಲದ ಚರಿತ್ರೆಯಲ್ಲಿ ಮನುಷ್ಯ ಕಂಡುಹಿಡಿದ ಅತ್ಯುನ್ನತ ಆವಿಷ್ಕಾರಗಳೆಂದರೆ ಬೆಂಕಿ, ಚಕ್ರಭಾಷೆ ಎಂದು ಪರಿಗಣಿಸಲಾಗಿದೆ. ಬಹುಶಃ ನಾಲ್ಕನೆಯ ಆವಿಷ್ಕಾರ ಏನಾದರೂ ಇದ್ದರೆ ಅದುಸಂಗೀತಎಂದು ನಿಸ್ಸಂಶಯವಾಗಿ ಹೇಳಬಹುದು. ಹೇಳಿ, ಸಂಗೀತಕ್ಕೆ ತಲೆದೂಗದ ತಲೆ ಯಾವುದಿದೆ..?  

 

·-  ನಿಮ್ಮವನು,

 ರಾಜ್