ಬುಧವಾರ, ಸೆಪ್ಟೆಂಬರ್ 25, 2019

ಮಿಸ್ ಯೂ ಅಂದಗಾತಿ


ಬರಿದಾದ ಮನದೊಳಗೆ ಪುಟ್ಟ ಪುಟ್ಟ
ಹೆಜ್ಜೆನಿಡುತ ಬಂದವಳೇ....
ನನ್ನ ನಿನ್ನ ನಡುವೆ ಏನೆಲ್ಲಾ ಇತ್ತು
ಅದು ನಮ್ಮಿಬ್ಬರಿಗೆ ಮಾತ್ರವೇ ಗೊತ್ತು

ನೆನಪುಗಳ ಪಾತ್ರೆಯೊಳಗೆ
ಕೈ ಹಾಕಿ ಕದಡಿದರೆ
ಅದೆಷ್ಟು ಸವಿನೆನಪುಗಳ ಸರಮಾಲೆ

ನೋಡಿದ ನೋಟಗಳು, ಆಡಿದ
ಪಿಸುಮಾತುಗಳು, ಹಂಚಿಕೊಂಡ
ಕನಸು ಕನವರಿಕೆಗಳಿಗೆ
ಲೆಕ್ಕವಿಟ್ಟವರಾರು....?

ಹಂಚಿಕೊಂಡ ಕನಸುಗಳನು
ಅಕ್ಕರೆಯಿಂದ ಪೋಣಿಸಿದ
ಮುತ್ತಿನ ಹಾರವನ್ನು ಹರಿದವರಾರು

ಕೈಗೂಡದ ಕನಸುಗಳು
ಕಾರ್ಗತ್ತಲಿನಲ್ಲಿ ಕರಗಿಹೋದ
ಕ್ಷಣಗಳಿನ್ನೂ ಎದೆಯಲ್ಲಿ
ಚುಚ್ಚಿ ಚುಚ್ಚಿ ನೋಯಿಸುತ್ತಿದೆ

ಅರಳುವ ಮೊದಲೇ ಕಮರಿಹೋದ
ಕಂಡ ಕನಸುಗಳು ಈಗ
ಬರೀ ನೆನಪುಗಳು...

ಸುಳ್ಳು ಸುಳ್ಳು ಮುನಿಸುಗಳ
ಮಧ್ಯೆ ಶಿಥಿಲಗೊಂಡಿದ್ದು
ಪ್ರೇಮವೂ ಹೌದು, ಬದುಕೂ ಹೌದು...

ಹೌದು, ಪ್ರೇಮ ಮಧುರವಾದುದು
ಅದು ಕೊಡುವ ನೋವು ಕೂಡಾ...

ಸಿಗಲಾರದ ಪ್ರಾರ್ಥನಾಳಿಗಾಗಿ
ಹಂಬಲಿಸುವ ಹಿಮವಂತ್ ನಾನು
ನಿನ್ನ ಪ್ರೀತಿಗಾಗಿ ಸದಾ ನಿನ್ನ ಧೇನಿಸುವ
ಇಂತಿ ನಿನ್ನ ಹಿಮವಂತ್...
                                   
                                     - ರಾಜ್ 
(ರವಿ ಬೆಳಗೆರೆ ಅವರ "ಹೇಳಿಹೋಗು ಕಾರಣ" ಕಾದಂಬರಿಯಿಂದ ಪ್ರೇರಣೆಗೊಂಡು ರಚಿಸಿದ್ದು...)